ಸಿಂಗ 2019ರ ಕನ್ನಡ ಭಾಷೆಯ ಚಲನಚಿತ್ರ, ವಿಜಯ್ ಕಿರಣ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಚಿರಂಜೀವಿ ಸರ್ಜಾ,ಅಧಿತಿ ಪ್ರಭುದೇವ, ತಾರಾ ಮತ್ತು ಅರುಣಾ ಬಾಲರಾಜ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ . ಈ ಚಿತ್ರವು ಸಿಂಗ (ಚಿರಂಜೀವಿ ಸರ್ಜಾ), ಅವರ ತಾಯಿ ಜಾನಕಮ್ಮ (ತಾರಾ), ಅವರ ಪ್ರೇಯಸಿ ಗೀತಾ (ಅದಿತಿ ಪ್ರಭುದೇವ) ಮತ್ತು ಖಳನಾಯಕ ರುದ್ರಸ್ವಾಮಿ (ರವಿಶಂಕರ್) ಅವರ ಜೀವನವನ್ನು ಆಧರಿಸಿದೆ..ಈ ಚಿತ್ರವು 2013 ರ ತಮಿಳು ಚಿತ್ರ ಕುಟ್ಟಿ ಪುಲಿಯ ರಿಮೇಕ್ ಆಗಿದೆ. == ಪಾತ್ರವರ್ಗ == ಸಿಂಗಾ ಪಾತ್ರದಲ್ಲಿ ಚಿರಂಜೀವಿ ಸರ್ಜಾ ಗೀತಾ ಪಾತ್ರದಲ್ಲಿ ಅಧಿತಿ ಪ್ರಭುದೇವ ರುದ್ರಸ್ವಾಮಿ ಪಾತ್ರದಲ್ಲಿ ಪಿ ರವಿಶಂಕರ್ ಜಾನಕಮ್ಮ ಪಾತ್ರದಲ್ಲಿ ತಾರಾ == ಧ್ವನಿಪಥ == ಚೇತನ್ ಕುಮಾರ್, ಕವಿರಾಜ್ ಮತ್ತು ವಿ.ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯಕ್ಕೆ ಧರ್ಮ ವಿಶ್ ಧ್ವನಿಪಥವನ್ನು ಸಂಯೋಜಿಸಿದ್ದಾರೆ. == ಬಿಡುಗಡೆ == ಚಿತ್ರದ ಅಧಿಕೃತ ಟ್ರೈಲರ್ ಅನ್ನು ಆನಂದ್ ಆಡಿಯೋ 14 ಜೂನ್ 2019 ರಂದು ಬಿಡುಗಡೆ ಮಾಡಿತು. ಈ ಚಿತ್ರವು 19 ಜುಲೈ 2019 ರಂದು ರಾಜ್ಯಾದ್ಯಂತ ಬಿಡುಗಡೆಯಾಯಿತು. == ಪ್ರತಿಕ್ರಿಯೆ == === ವಿಮರ್ಶಾತ್ಮಕ ಪ್ರತಿಕ್ರಿಯೆ === ತಾರಾ ಅವರ ಅಭಿನಯವನ್ನು ಶ್ಲಾಘಿಸಿದ ಟೈಮ್ಸ್ ಆಫ್ ಇಂಡಿಯಾದ ವಿನಯ್ ಲೋಕೇಶ್ ಈ ಚಿತ್ರಕ್ಕೆ ಐದರಲ್ಲಿ ಎರಡೂವರೆ ಸ್ಟಾರ್ ಗಳನ್ನು ನೀಡಿದರು, "ಮಾಸ್ ಚಲನಚಿತ್ರಗಳನ್ನು ಇಷ್ಟಪಡುವವರಿಗೆ ಸಿಂಗ ಒಂದು ಬಾರಿ ವೀಕ್ಷಿಸಬಹುದಾದ ಚಿತ್ರ" ಎಂದು ಬರೆದಿದ್ದಾರೆ. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಸಿಂಗ @ ಐ ಎಮ್ ಡಿ ಬಿ